ಮಂಗಳೂರು ಅಧಿಕೃತ ಕೋಳಿ ಸುಕ್ಕ

Mangaluru Koli Sukka

ಸಾಮಗ್ರಿಗಳು: 
1 ಕೆಜಿ  ಕೋಳಿ ಮಾಂಸ (ಮದ್ಯಮ ಗಾತ್ರದ ತುಂಡುಗಳು)
1
ಮದ್ಯಮ ಗಾತ್ರದ ತೆಂಗಿನ ಕಾಯಿಯ ತುರಿ
25
ಒಣ ಮೆಣಸು 
4
ಚಮಚ ಕೊತ್ತಂಬರಿ ಬೀಜ 
1
ಚಮಚ ಕಾಳು ಮೆಣಸು (ಸುಮಾರು 20)
½
ಚಮಚ ಮೆಂತೆ ಕಾಳು 
10 
ಸಹಜ ಗಾತ್ರದ ಬೆಳ್ಳುಳ್ಳಿ ಎಸಳುಗಳು (ಸಿಪ್ಪೆ ಸುಲಿಯಬಾರದು)
25
ಎಸಳು ಕರಿಬೇವು 
ಚಮಚ ಅರಶಿಣ ಪುಡಿ 
ತೆಂಗಿನ ಎಣ್ಣೆ (ಮಿತವಾದ ಬಳಕೆಗೆ)
2
ಚಮಚ ಶುಂಠಿ-ಬೆಳ್ಳುಳ್ಳಿ ಗಂಜಿ (Ginger-Garlic Paste)
ಕಲ್ಲು ಉಪ್ಪು (ಅಥವಾ ಪುಡಿ ಉಪ್ಪು)
2
ದೊಡ್ಡ ಈರುಳ್ಳಿ
2
ಚಕ್ಕೆ ತುಂಡು 
4
ಏಲಕ್ಕಿ 
3
ಲವಂಗ 
1
ಚಮಚ ಗಸಗಸೆ   
1
ಜಾಯಿಕಾಯಿ
1
ಅಥವಾ 2 ಪಲಾವ್ ಎಲೆ 
2
ಮರಾಠಿ ಮೊಗ್ಗು 

ಅಡುಗೆಯ ವಿಧಾನ:

1. ಕೋಳಿ ಮಾಂಸದ ಪೂರ್ವಸಿದ್ಧತೆ:

  • ಕತ್ತರಿಸಿದ ಮದ್ಯಮ ಗಾತ್ರದ ಕೋಳಿ ತುಂಡುಗಳನ್ನು ಅರಶಿಣ ಹುಡಿ ಮತ್ತು ಉಪ್ಪು ಹಾಕಿ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. 
  • ತೊಳೆದ ನಂತರ ಅದನ್ನು ಅನ್ನ ಬಸೆಯುವ ಪಾತ್ರೆಯಲ್ಲಿ ಹಾಕಿ, ಅದರ ನೀರು ಹೋಗಲು ಬಿಡಿ.
  • ಅಡುಗೆಗೆ ಬಳಸುವ ಸಂಧರ್ಭದಲ್ಲಿ ಕೋಳಿ ತುಂಡುಗಳಲ್ಲಿ ಯಾವುದೇ ನೀರಿನ ಅಂಶ ಇರಬಾರದು.

2. ಒಣ ಮಸಾಲೆ ತಯಾರಿ:    

  • ಕಬ್ಬಿಣದ ತವವನ್ನು ಒಲೆಯ ಮೇಲೆ ಇಟ್ಟು ಚೆನ್ನಾಗಿ ಕಾದ ಮೇಲೆ, ಮೊದಲು 25 ಒಣ ಮೆಣಸುಗಳನ್ನು ಯಾವುದೇ ಎಣ್ಣೆ ಹಾಕದೆ ಚೆನ್ನಾಗಿ ಗರಿಗರಿಯಾಗುವವರೆಗೆ ಹುರಿಯಬೇಕು. ನಂತರ ಅದನ್ನು ಮಿಕ್ಸಿ ಜಾರ್ ಗೆ ವರ್ಗಾಯಿಸಿ.   
  • ಅದೇ ತವದ ಮೇಲೆ, ಈಗ 4 ಚಮಚ ಕೊತ್ತಂಬರಿ ಬೀಜಗಳನ್ನು ಅದರ ಪರಿಮಳ ಬರುವವರೆಗೂ ಚೆನ್ನಾಗಿ ಹುರಿದು ನಂತರ ಮಿಕ್ಷಿ ಜಾರ್ ಗೆ ವರ್ಗಾಯಿಸಿ.
  • ಹೀಗೆಯೇ ಮುಂದೆ 1 ಚಮಚ ಕಾಳು ಮೆಣಸು, ½ ಚಮಚ ಮೆಂತೆ, 2 ಚಕ್ಕೆ ತುಂಡು, 4 ಏಲಕ್ಕಿ, 3 ಲವಂಗ, 1 ಚಮಚ ಗಸಗಸೆ, 1 ಜಾಯಿಕಾಯಿ, 1 ಅಥವಾ 2 ಪಲಾವ್ ಎಲೆ, 2 ಮರಾಠಿ ಮೊಗ್ಗು ಎಲ್ಲವನ್ನು ಒಂದೊಂದಾಗಿ ಹುರಿದು ಮಿಕ್ಷಿ ಜಾರ್ ಗೆ ವರ್ಗಾಯಿಸಿ.
  • ಈಗ ಅದೇ ತವದ ಮೇಲೆ 1 ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಕಾಯಿಸಿ ಅದರಲ್ಲಿ 15 ಕರಿಬೇವಿನ ಎಲೆಗಳನ್ನು ಚೆನ್ನಾಗಿ ಗರಿಗರಿಯಾಗುವವರೆಗೆ ಹುರಿದು ಮಿಕ್ಷಿ ಜಾರ್ ಗೆ ವರ್ಗಾಯಿಸಿ.
  • ಈಗ ಬೆಂಕಿಯನ್ನು ಆರಿಸಿ, ಬಿಸಿ ತವದ ಮೇಲೆ ತೆಂಗಿನ ಕಾಯಿಯ ತುರಿಯನ್ನು ಹರಡಿರಿ (ಮುಂದೆ ಅಡುಗೆಗೆ ಉಪಯೋಗಿಸುವವರೆಗೆ ಅದರ ಮೇಲೆಯೇ ಬಿಡಿ.).
  • ಈಗ ಮಿಕ್ಷಿ ಜಾರ್ ಗೆ ಹಾಕಿರುವ ಎಲ್ಲಾ ಹುರಿದ ಪದಾರ್ಥಗಳು ತಣ್ಣಗಾದ ಮೇಲೆ, ನೀರು ಸೇರಿಸದೇ ನುಣ್ಣಗೆ ಹುಡಿ ಮಾಡಿ ಇಡಿ. 

3. ಅಡುಗೆ ಮಾಡುವ ವಿಧಾನ:

  1. ಒಂದು ಮದ್ಯಮ ಗಾತ್ರದ ಬಾಣಲೆಗೆ 3-4 ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಕಾಯಿಸಿ
  2. ಎಣ್ಣೆ ಕಾದ ಮೇಲೆ ಎರಡು ದೊಡ್ಡ ಗಾತ್ರದ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
  3. ಈಗ ಅದಕ್ಕೆ 10 ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ
  4. ನಂತರ ಹತ್ತು ಬೆಳ್ಳುಳ್ಳಿ ಎಸಳುಗಳನ್ನು ಅದಕ್ಕೆ ಸೇರಿಸಿ ಚನ್ನಾಗಿ ಹುರಿಯಿರಿ
  5. ಈಗ ಎರಡು ಚಮಚ ಶುಂಠಿ-ಬೆಳ್ಳುಳ್ಳಿ ಗಂಜಿಯನ್ನು ಸೇರಿಸಿ ಚೆನ್ನಾಗಿ ಹುರಿಯುತ್ತ ತಿರುವಿ.
  6. ಈಗ ಕೋಳಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ತಿರುವಿ ನಂತರ ಅದನ್ನು ಮುಚ್ಚಿ 15 ನಿಮಿಷ ಬೇಯಿಸಿ
  7. ಸುಮಾರು 15 ನಿಮಿಷಗಳ ನಂತರ ಕೋಳಿ ತುಂಡುಗಳು ಚೆನ್ನಾಗಿ ನೀರು ಬಿಟ್ಟಿರುತ್ತವೆ. ನೀರು ಆವಿ ಆಗುವವರೆಗೆ ಪಾತ್ರೆ ಮುಚ್ಚದೆ ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ತಿರುವುತ್ತಾ ಬೇಯಿಸಿ
  8. ಈಗ ಮಿಕ್ಷಿ ಜಾರ್ ನಲ್ಲಿ ಇರುವ ಒಣ ಮಸಾಲೆ ಹುಡಿಯನ್ನು ಸೇರಿಸಿ ಚೆನ್ನಾಗಿ ತಿರುವಿ. ಸುಮಾರು 5 ನಿಮಿಷಗಳ ಕಾಲ ಚೆನ್ನಾಗಿ ತಿರುವುತ್ತಾ ಕೋಳಿ ತುಂಡುಗಳನ್ನು ಮಸಾಲೆ ಜೊತೆ ಬೇಯಿಸಿ
  9. ಈಗ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಒಂದು ನಿಮಿಷ ಬೇಯಿಸಿ.
  10. ಕೊನೆಯದಾಗಿ ಹದವಾಗಿ ಹುರಿದ ತೆಂಗಿನ ಕಾಯಿ ತುರಿಯನ್ನು ಸೇರಿಸಿ 5 ನಿಮಿಷಗಳ ಕಾಲ ಚೆನ್ನಾಗಿ ತಿರುವುತ್ತಾ ಬೇಯಿಸಿ, ನಂತರ ಅದನ್ನು ಮುಚ್ಚಿ, ಒಲೆಯನ್ನು ಆರಿಸಿ. ಈಗ ಮಂಗಳೂರಿನ ಅಧಿಕೃತ ಕೋಳಿ ಸುಕ್ಕ ತಯಾರಾಗಿದೆ.

ಸೂಚನೆ: ಮೇಲೆ ತಿಳಿಸಿದ ಅಳತೆಗೆ ಬಳಸುವ ಚಮಚ, ಮಧ್ಯಮ ಗಾತ್ರದ ಸ್ಟೀಲ್ ಚಮಚವಾಗಿದೆ. 


Comments